WWW.TULUFILM.COM
+91 96327 14896 info@tulufilm.com
Profiles
ಲೀಲಾವತಿ
Published on 18 August 2016
3251

ಕನ್ನಡ ಚಿತ್ರರಂಗದ ಹಿರಿಯ ತಾರೆಯರಲ್ಲಿ ಒಬ್ಬರಾದ ಬಹುಭಾಷಾ ತಾರೆ ಲೀಲಾವತಿಯವರು ಹಲವಾರು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. ‘ದಾರೆದ ಬುಡೆದಿ’ ಚಿತ್ರದಿಂದ ತುಳು ಚಿತ್ರರಂಗಕ್ಕೆ ಕಾಲಿರಿಸಿದ ಅವರು ನಂತರದಲ್ಲಿ ಪಗೆತ ಪುಗೆ’, ಬಿಸತ್ತಿ ಬಾಬು’, ಯಾನ್ ಸನ್ಯಾಸಿ ಆಪೆ’, ಸಾವಿರಡೊರ್ತಿ ಸಾವಿತ್ರಿ’, ಭಾಗ್ಯವಂತೆದಿ’, ಬದ್ಕೆರೆ ಬುಡ್ಲೆ’ ಮತ್ತು ದಾರೆದ ಸೀರೆ’ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ. ಕನ್ನಡ ಚಿತ್ರರಂಗದ ಅಮ್ಮ ಎಂದೇ ಖ್ಯಾತಿ ಪಡೆದ ಲೀಲಾಕಿರಣ್ (ಲೀಲಾವತಿ) ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವರು.ಕಡುಬಡತನದ ಕುಟುಂಬದಲ್ಲಿ ಜನಿಸಿದ ಇವರು ಜೀವನ ನಿರ್ವಹಣಿಗಾಗಿ ಸುಬ್ಬಯ್ಯನಾಯ್ಡುರವರ ಎಸ್.ಎಸ್.ಎಸ್ ನಾಟಕ ಕಂಪೆನಿಗೆ ಸೇರುವುದರ ಮೂಲಕ ರಂಗಭೂಮಿ ಪ್ರವೇಶವಾಯಿತು. ನಂತರ 1949 ರಲ್ಲಿ ನಾಗ ಕನ್ನಿಕಾ ಚಿತ್ರದಲ್ಲಿ ಸಖಿಯ ಪಾತ್ರವನ್ನು ಮಾಡುವುದರ ಮೂಲಕ ಕನ್ನಡ ಚಿತ್ರರಂಗದ ಪ್ರವೇಶವಾಯಿತು. ಕನ್ನಡದ ಮೇರುನಟ ಡಾ/ ರಾಜ್ ಕುಮಾರ್ ಅವರೊಂದಿಗೆ ರಣಧೀರ ಕಂಠೀರವ ಚಿತ್ರದಲ್ಲಿ ಅಭಿನಯಿಸಿದ ಇವರು ಮುಂದೆ ರಾಣಿಹೊನ್ನಮ್ಮ,ಗಾಳಿಗೋಪುರ,ಗೆಜ್ಜೆಪೂಜೆ, ಸಿಪಾಯಿರಾಮು, ಡಾ/ಕೃಷ್ಣ,, ಸಂತ ತುಕಾರಾಮ್ ,ನಾಗರಹಾವು, ಭಕ್ತಕುಂಬಾರ ಅಲ್ಲದೆ ಸುಮಾರು ದಕ್ಷಿಣ ಭಾರತದ ಖ್ಯಾತ ನಟರಾದ ಎಂ.ಜಿ ರಾಮಚಂದ್ರನ್,ಎನ್.ಟಿ.ರಾಮ ರಾವ್,ಶಿವಾಜಿ ಗಣೀಶನ್, ಕಮಲ್ ಹಾಸನ್,ರಜನೀಕಾಂತ್ ,ಚಿರಂಜೀವಿ,ಮೊದಲಾದ   ನಟರೊಂದಿಗೆ  ಅಭಿನಯಿ
ಸಿದ್ದಾರೆ.ಸುಮಾರು 600ಕ್ಕೂ ಮಿಕ್ಕಿ ಚಲನಚಿತ್ರದಲ್ಲಿ ಅಭಿನಯಿಸಿದ ಇವರು ದಾರೆದ ಬುಡದಿ ಚಲನಚಿತ್ರದ ಮೂಲಕ ತುಳುಚಿತ್ರದ ಪ್ರವೇಶವಾಯಿತು ಪಗೆತಪುಗೆ ,ಬಿಸತ್ತಿಬಾಬು, ಭಾಗ್ಯವಂತೆದಿ,ಸಾವಿರಡೊರ್ತಿ ಸಾವಿತ್ರಿ ಇವರು ಅಭಿನಯಿಸಿದ ತುಳುಚಿತ್ರಗಳು ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬಬಲ್ಲ ಲೀಲಾವತಿಯವರಿಗೆ ಗೆಜ್ಜೆಪೂಜೆ, ಸಿಪಾಯಿರಾಮು, ಭಕ್ತಕುಂಬಾರ ಚಿತ್ರದ ಅಭಿನಯಕ್ಕಾಗಿ ರಾಜ್ಯಪ್ರಶಸ್ತಿ ಸಂದಿವೆ.ಅಲ್ಲದೆ 5 ದಶಕ ಕಾಲ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ರಾಜ್ಯ ಸರಕಾರವು 1999ರಲ್ಲಿ ಡಾ//ರಾಜ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers