WWW.TULUFILM.COM
+91 96327 14896 info@tulufilm.com
Profiles
ರಾಜೇಶ್ ಬಂಟ್ಟಾಳ
Published on 14 September 2016
rajesh-bantwal-01

ಪ್ರಖ್ಯಾತ ರಂಗಭೂಮಿ ಹಾಗೂ ತುಳು ಚಲನ ಚಿತ್ರ ಕಲಾವಿದ ನಾವೂರು ಗ್ರಾಮ ಕನಪಾದೆ ನಿವಾಸಿ ರಾಜೇಶ್ ಬಂಟ್ಟಾಳ (46) ಅವರು ಅಸೌಖ್ಯದಿಂದ ಸಪ್ಟೆಂಬರ್ 9ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ರಾಘವ ಆಚಾರ್ಯ ಹಾಗೂ ಶ್ರೀಮತಿ ವಾರಿಜ ದಂಪತಿಗಳ 5 ಮಂದಿ ಮಕ್ಕಳಲಲ್ಲಿ ಮೊದಲಿಗರಾದ ರಾಜೇಶ್ ಬಂಟ್ಟಾಳ ಅವರು ಅವಿವಾಹಿತರಾಗಿದ್ದು ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ತಂದೆಯ ಜೊತೆ ಸ್ವರ್ಣಾಭರಣ ತಯಾರಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ರಾಜೇಶ್ ಅವರು ಪ್ರಸಿದ್ಧ ರಂಗಭೂಮಿ ಕಲಾವಿದ ದಿ/ಶಾಂತರಾಮ ಕಲ್ಲಡ್ಕ ಅವರ ಕುಂಕುಮ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದರು.ನಂತರ ದೇವದಾಸ್ ಕಾಪಿಕಾಡ್ ಅವರ ಚಾಪರ್ಕ ತಂಡದೊಂದಿಗೆ ಗುರುತಿಸಿಕೊಂಡು ಪ್ರಸಿದ್ದಿ ಪಡೆದರು.ಪಂಡನಂಬಯರ್,ಅಕ್ಕ,ಮಾಮು,ಪುದರ್ ದೀತಿಜಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ ರಾಜೇಶ್ ನಂತರ ವಿಜಯಾಕುಮಾರ್ ಕೊಡಿಯಾಲ್ ಬೈಲ್ ಅವರ ಅಸಲ್ ಏರ್ ನಾಟಕದಲ್ಲಿ ಏಕಕಾಲಕ್ಕೆ ನಾಲ್ಕು ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನ ಪ್ರಿಯಾರಾದರು.ನಂತರ ವಿದ್ದು,ಭೋಜೆ ಬುಡಿಯೆರೆಗೆ,ಮಾಮುಗೊಂಜಿ ಮಾಮಿ, ಅಕ್ಲೆಲೆಕ ಎಂಕ್ಲುತ್,ಕೊಡೆ ಇನಿ ಎಲ್ಲೆ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಪ್ರಖ್ಯಾತ ತುಳು ಚಲನ ಚಿತ್ರ ಒರಿಯಾರ್ದೊರಿ ಅಸಲ್ ನ ಡ್ರೈವರ್ ಬಾಬಣ್ನ ಪಾತ್ರ ಅಲ್ಲದೆ ಕಡಲಮಗೆ,ಜುಗಾರಿ,ಮುಂತಾದ ಚಲನ ಚಿತ್ರಗಳಲ್ಲಿ ಅಭಿನಯಿಸಿದ ಇವರು ತುಳು ಧಾರಾವಾಹಿ ಗೊತ್ತಾನಗ ಪೊರ್ತಾoಡ್, ಹಾಗೂ ಮುಕ್ತ ಮುಕ್ತ,ಹಸಿರುಸಿರಿಹೊನ್ನು ಎಂಬ ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.ಬಂಟ್ವಾಳನಾವೂರು ಕಲಾನಿಧಿ ಕಲಾವಿದರ್,ಕನಕಪಾದೆಸತ್ಯದೇವತಾಗೆಳೆಯರಬಳಗ,ಆಸರೆ ಕಲಾವಿದರು,ನಾವೂರು ಯುವಕಮಂಡಲ ಮೊದಲಾದ ತಂಡಗಳಲ್ಲಿ ಸಕ್ರೀಯರಾಗಿದರು.ಕಳೆದ 28 ವರ್ಷಗಳಲ್ಲಿ ರಂಗಭೂಮಿ ಚಲನ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ಇವರನ್ನು ಹಲವಾರು ಸಂಘ ಸಂಸ್ಥೆಗಳು ಇವರ ಕಲಾಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers