WWW.TULUFILM.COM
+91 96327 14896 info@tulufilm.com
Profiles
ಬೇಲೆಕೇರಿ ಚರಣ್ ಕುಮಾರ್ (ರಾಗ್ ದೇವ್)
Published on 8 October 2016

ಬೇಲೆಕೇರಿ ಚರಣ್ ಕುಮಾರ್ (ರಾಗ್ ದೇವ್)
ಅತ್ಯಂತ ಹೆಚ್ಚು ತುಳು ಚಿತ್ರಗಳಿಗೆ ಸಂಗೀತ ನೀಡಿರುವ ಖ್ಯಾತಿ ಬಿ. ಚರಣ್ ಕುಮಾರ್ ಅವರದ್ದು. ಅವರು ರಾಗ ಸಂಯೋಜಿಸಿ, ಸಂಗೀತ ನೀಡಿರುವ ಹೆಚ್ಚಿನ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಉದಾಹರಣೆಯಾಗಿ ‘ಬೊಳ್ಳಿದೋಟ’, ‘ಬಂಗಾರ್ ಪಟ್ಲೇರ್’, ‘ಬದ್ ಕ್ ದ ಬಿಲೆ’ ಮುಂತಾದ ಚಿತ್ರಗಳನ್ನು ಹೆಸರಿಸಬಹುದು. ಬಿಡುಗಡೆಯಾಗದೆ ಡಬ್ಬದಲ್ಲೇ ಉಳಿದ ‘ಸರ್ಪ ಸಂಕಲೆ’ಗೆ ಅವರು ಸಂಗೀತ ನೀಡಿದ್ದರೂ, ನಿಜವಾದ ಅರ್ಥದಲ್ಲಿ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ತನ್ನ ಅಣ್ಣ ಅಶೋಕ್ ಅವರ ಜೊತೆ ‘ಕಾಸ್ದಾಯೆ ಕಂಡನೆ’ ಚಿತ್ರದ ಮೂಲಕ.
ಶಾಲಾದಿನಗಳಿಂದಲೇ ಸಂಗೀತಾಸಕ್ತರಾಗಿದ್ದ ಚರಣ್ ಕುಮಾರ್ ಅವರು ಅಶೋಕ್ ಜೊತೆ ಸೇರಿಕೊಂಡು ಅಶೋಕ್-ಚರಣ್ ಹೆಸರಿನಲ್ಲಿ ಸಂಗೀತ ತಂಡವನ್ನು ರಚಿಸಿದ್ದರು. ಈ ತಂಡ ದೇಶ-ವಿದೇಶಗಳಲ್ಲಿ ನಡೆಸುತ್ತಿದ್ದ ‘ಅಶೋಕ್-ಚರಣ್ ನೈಟ್’ ರಸಮಂಜರಿ ಕಾರ್ಯಕ್ರಮಗಳಿಗೆ ಜನರು ಕಿಕ್ಕಿರಿದು ಸೇರುತ್ತಿದ್ದರು. ಅವರು ಕನ್ನಡ, ಕೊಂಕಣಿ ಮತ್ತು ತುಳು ಭಾಷೆಗಳಲ್ಲಿ 15ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಅವರು ರಾಗ್ ದೇವ್ ಎಂಬ ಹೆಸರಿನಲ್ಲಿ ‘ಬಂಗಾರ್ ಪಟ್ಲೇರ್’ನಿಂದ ಆರಂಭಿಸಿ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರು ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ನಟನೆಯನ್ನೂ ಮಾಡಿರುವುದಲ್ಲದೇ ಕೆಲವು ಹಾಡುಗಳನ್ನು ಸ್ವತಃ ಹಾಡಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers