WWW.TULUFILM.COM
+91 96327 14896 info@tulufilm.com
Reviews
ಬರ್ಸ
Published on 15 September 2016
??

 

3000500

??

ಬರ್ಸ ಧ್ವನಿ ಸುರುಳಿ ಬಿಡುಗಡೆ
ಬೊಳ್ಳಿ ಮೂವೀಸ್ ಬ್ಯಾನರ್ಸ್ ನಲ್ಲಿ ನಿರ್ಮಾಣವಾದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸಿದ ತುಳು ಚಲನ ಚಿತ್ರ “ಬರ್ಸ”ಚಿತ್ರದ ಧ್ವನಿ ಸುರುಳಿಯನ್ನು ಮಂಗಳೂರಿನ ಪುರಭವನದಲ್ಲಿ ಇತ್ತೀಚಿಗೆ ಶ್ರೀದೇವಿ ವಿದ್ಯಾಸಮೂಹ ಸಂಸ್ಥೆಗಳ ಅದ್ಯಕ್ಷರಾದ ಎ.ಸದಾನಂದ ಶೆಟ್ಟಿಯವರು ಬಿಡುಗಡೆಗೊಳಿಸಿದರು ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ನಾಲ್ಕು ಹಾಡುಗಳಿಗೆ ದೇವದಾಸ್ ಕಾಪಿಕಾಡ್ ಅವರು ಸಾಹಿತ್ಯ ಬರೆದ್ದಿದ್ದಾರೆ.”ಮೋಕೆದಾ ಬಣ್ಣ ಎಂಕಾದೆ ತೆಲಿಪರೆಯಾ” ಎಂಬ ಹಾಡಿಗೆ ಅರ್ಜುನ್ ಕಾಪಿಕಾಡ್ ಅವರು ಸಾಹಿತ್ಯ ಬರೆದು ಹಾಡಿದ್ದಾರೆ.ಅಲ್ಲದೆ ರೂಪಾಪ್ರಕಾಶ್ ಅವರು ಧ್ವನಿಗೂಡಿಸಿದ್ದಾರೆ.ತುಳುನಾಡಿನ ಹುಲಿವೇಷದ ಕುಣಿತವನ್ನು ಬಿಂಬಿಸುವ“ ತಾಸೆದ ಪೆಟ್ಟ್ಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನಾ….ಆಸೆದ ಕಣ್ಣ್ಡ್ ಊರುದ ಪೊಣ್ಣುಲು ತೆಲಿಪುನಾ ಮರ್ಲ್ ತೂಯನಾ ಎಂಬ ಹಾಡನ್ನು ದೇವದಾಸ್ ಕಾಪಿಕಾಡ್ ಅವರು ಹಾಡಿದ್ದಾರೆ.ಅಲ್ಲದೆ ಒಂದು ಹಾಡನ್ನು ತಮಿಳಿನ ಖ್ಯಾತ ಗಾಯಕರಾದ ಕಾರ್ತಿಕ್       ಹಾಡಿದ್ದಾರೆ.ಚಿತ್ರಕ್ಕೆ ಮಣಿಕಾಂತ್ ಕದ್ರಿಯವರು ಸಂಗೀತ ಸಂಯೋಜನೆ ನೀಡಿದ್ದು.ಈ ಸಂದರ್ಭದಲ್ಲಿ ಅವರನ್ನು  “ಫ್ರಿನ್ಸ್ ಆಫ್ ಮೆಲೋಡಿ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿಸಚಿವ ಕೃಷ್ಣ.ಜಿ.ಪಾಲೇಮಾರ್,ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ,ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ.ಟಿ.ವಿ.ಶ್ರೀನಿವಾಸ್, ದೇವದಾಸ್ ಕಾಪಿಕಾಡ್ ನಿರ್ಮಾಪಕರಾದ ಮುಕೇಶ್ ಹೆಗ್ಡೆ, ಶರ್ಮಿಳಾ ಕಾಪಿಕಾಡ್,ಸ್ವಪ್ನ ಕಿಣಿ,ಅರ್ಜುನ್ ಕಾಪಿಕಾಡ್,ನಾಯಕಿ ಕ್ಷಮಾ ಶೆಟ್ಟಿ,ವಿಜಯಕುಮಾರ್ ಕೊಡಿಯಾಲ್ ಬೈಲ್
,ಜಗನ್ನಾಥ ಶೆಟ್ಟಿ ಬಾಳ,ಸಚಿನ್,ರಾಜೇಶ್ ಭಟ್,ಸಂತೋಷ್ ಶೆಟ್ಟಿ,ರಾಜೇಶ್ ಬ್ರಹ್ಮಾವರ,ಪ್ರಕಾಶ್ ಪಾಂಡೇಶ್ವರ,ವಿ.ಜಿ.ಪಾಲ್ ಹಾಗೂ ತುಳು ಚಿತ್ರರಂಗದ ಕಲಾವಿದರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers