WWW.TULUFILM.COM
+91 96327 14896 info@tulufilm.com
Films
ದಗಲ್ ಬಾಜಿಲು
Published on 4 December 2017
5252

 

0002

ಅನುಗ್ರಹ ಫಿಲಂಸ್ ಲಾಂಛನದಲ್ಲಿ ಕುಂಬ್ಲೆ ಸಂತೋಷ ಶೆಟ್ಟಿ ಮತ್ತು ಸ್ನೇಹಿತರು ಜೊತೆಗೂಡಿ ನಿರ್ಮಿಸಿರುವ ಚಿತ್ರಕ್ಕೆ ನಿರ್ದೇಶನವನ್ನು ಖ್ಯಾತ ನಿರ್ದೇಶಕ ಎಮ್.ಡಿ ಶ್ರೀಧರ್ ರವರ ಗರಡಿಯಲ್ಲಿ ಪಳಗಿದ ಎ.ಎಸ್ ಪ್ರಶಾಂತ್ ರವರು ಮಾಡಿದ್ದಾರೆ. ಚಿತ್ರದ ಕಥೆ – ಚಿತ್ರಕಥೆ ಸಂಭಾಷಣೆ – ಸಾಹಿತ್ಯ ಬರೆದು ವಿಭಿನ್ನ ಪ್ರಾತದಲ್ಲಿ ಸುರೇಶ್ ಅಂಚನ್ ಮೂಡಬಿದ್ರೆ ಯವರು ಅಭಿನಯಿಸಿದ್ದಾರೆ.ಚಿತ್ರಕ್ಕೆ ಸಹ – ನಿರ್ದೇಶನದ ಕೆಲಸವನ್ನು ಕೆ. ಜಗದೀಶ್ ರೆಡ್ಡಿ ಮಾಡಿದ್ದಾರೆ. ರಾಜಾಹುಲಿ, ಕಿರಣ್ ಬೇಡಿ, ಲೇಡಿ ಕಮೀಷನರ್,ನೀರುದೋಸೆ, ರಾಜಸಿಂಹ ಮುಂತಾದ ಚಿತ್ರಗಳಿಗೆ ಉತ್ತಮ ಛಾಯಗ್ರಹಣ ಮಾಡಿದ ಕೆ.ಎಮ್ ವಿಷ್ಣುವರ್ಧನರವರು ಕ್ಯಾಮೆರಾ ಕೈ ಚಳಕ ತೋರಿಸಿದ್ದಾರೆ.ಶ್ರೀನಿವಾಸ್ ಪಿ ಬಾಬುರವರ ಸಂಕಲನ, ಕಲಾ ನಿರ್ದೇಶನವನ್ನು ವಿಲ್ಪ್ರೇಡ್ ಪಿಂಟೋರವರು ಮಾಡಿದ್ದಾರೆ.ಹಾಗೂ ಮಂಗಳೂರಿನ ಹೆಸರಾಂತ ಸಂಗೀತ ಗಾಯಕರಾದ R.D  ವರ್ಮನ್ ಮತ್ತು ಸಂದೇಶ್ ಬಾಬುರವರು ಜೊತೆಗೂಡಿ ಈ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ರಾಜ್ಯ ಪ್ರಶಸ್ತಿ ವಿಜೇತ ಎಸ್ ಪಿ ಚಂದ್ರಕಾಂತ್ ರವರು ಮಾಡಿದ್ದಾರೆ ಚಿತ್ರದಲ್ಲಿ ಒಟ್ಟು ೬ ಹಾಡುಗಳಿದ್ದು . ಖ್ಯಾತ ಗಾಯಕರುಗಳಾದ ರಾಜೇಶ್ ಕೃಷ್ಣನ್ , ಅನುರಾಧ ಭಟ್, ಯಕ್ಷಧ್ರುವ ಸತೀಶ್ ಪಟ್ಲ ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್,ನವೀನ್ ಡಿ ಪಡೀಲ್ , ಪ್ರಕಾಶ್ ಮಹಾದೇವನ್, ರೂಪಾ ಪ್ರಕಾಶ್,ಮಹಮ್ಮದ್ ಇಕ್ಬಾಲ್, ಧನಂಜಯ ವರ್ಮ, ಸಂದೇಶ್ ಬಾಬುರವರು ಹಾಡಿದ್ದಾರೆ.

ಚಿತ್ರದಲ್ಲಿ ನಾಯಕ -ನಾಯಕಿಯಾಗಿ ವಿಘ್ನೇಶ್ ರಶ್ಮಿಕಾ ನಟಿಸಿದ್ದಾರೆ.ನವೀನ್ ಡಿ ಪಡೀಲ್ ,ಅರವಿಂದ ಬೋಳಾರ್,ಬೋಜರಾಜ್ ವಾಮಂಜೂರು ದೀಪಕ್ ರೈ ,ಸತೀಶ್ ಬಂದಲೆ , ಉಮೇಶ್ ಮಿಜಾರ್, ತಿಮ್ಮಪ್ಪ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ,ಪ್ರಕಾಶ್ ತೂಮಿನಾಡು ,ಮನೋಹರ್ ಶೆಟ್ಟಿ ನಂದಳಿಕೆ , ಮಣಿ ಕೋಟೆಬಾಗಿಲು ಚಂದ್ರಶೇಖರ್ ಸಿದ್ದ ಕಟ್ಟೆ,ವಿಜಯ ಮೈಯ್ಯ,ಪ್ರಿಯಾ ಹೆಗ್ಡೆ, ನೀಮಾರೇ, ರೂಪಾ ವರ್ಕಾಡಿ,ನಮಿತಾ ಮುಂತಾದವರು ನಟಿಸಿದ್ದಾರೆ.
ಈ ಚಿತ್ರದ ಚಿತ್ರೀಕರಣವು ಮೂಡಬಿದ್ರೆ ಮಂಗಳೂರು,ಉಡುಪಿ,ಮಣಿಪಾಲದ ಸುತ್ತ ಮುತ್ತ ಸತತ 35 ದಿನಗಳಲ್ಲಿ ಭರದಿಂದ ಚಿತ್ರಿಕರಣಗೊಂಡಿದೆ. ನಿರ್ಮಾಣ ನಿರ್ವಹಣಿ ಕೆಲಸವನ್ನು ಸತೀಶ್ ಬ್ರಹ್ಮಾವರ ಇವರು ನಿರ್ವಹಿಸಿದ್ದಾರೆ.
ಕಥಾ ಸಾರಾಂಶ : ವಾಸ್ತಾವಿಕವಾಗಿ ನಮ್ಮ ನಡುವೆ ಪ್ರತಿಯೊಬ್ಬರು ಸ್ವಾರ್ಥ ದ್ವೇಷ, ಅಸೂಯೆ, ಮತ್ಸರದ ನಿಲುವಿನಡಿಯಲ್ಲಿ ಒಂದಲ್ಲ ಒಂದು ವಿಷಯಕ್ಕೆ ರಕ್ತ ಸಂಬಂಧಿಕರಿಂದ, ಗೆಳೆಯರಿಂದ,ಮತ್ತಿತ್ತರಿಂದ ಮೋಸ ವಂಚನೆಗೆ ಒಳಗಾದವರೇ ಇರುವುದು.ಈ ಒಂದು ಕಥೆಯ ತಿರುಳನ್ನು ಹಿಡಿದು “ದಗಲ್ ಬಾಜಿಲು” ಎಂಬ ತುಳು ಚಿತ್ರ ಶೇ. 65% ಸಂಪೂರ್ಣ ಕಾಮಿಡಿ ಮತ್ತು ಮನೋರಂಜನೆ ಶೇ 35% ಮನುಷ್ಯನ ಭಾವನಾತ್ಮಕ ಸಂಬಂಧಗಳ ಪ್ರೀತಿಯ ಸುತ್ತ ಇರುವ ಕಥೆಯನ್ನು ಒಳಗೊಂಡಿದೆ. ತಿಳಿದು ತಿಳಿಯದೆಯೂ ಮೋಸಕ್ಕೆ ಒಳಗಾಗುವರು ಇರೊವರೆಗೂ ಮೋಸ ಮಾಡುವ ಜನರು ನಮ್ಮ ಜೊತೆ ಹುಟ್ಟುತ್ತಲೆ ಇರುತ್ತಾರೆ. “ದಗಲ್ ಬಾಜಿಲು ” ಚಿತ್ರದಲ್ಲಿ ಮೋಸ ವಂಚನೆ ಸಂಘರ್ಷ ಹಾಗೂ ಸಾಂಸರಿಕ ಜಂಜಾಟಗಳನ್ನು ಪ್ರತಿಬಿಂಬಿಸುವ ಸನ್ನಿವೇಶಗಳು ಅನಾವರಣಗೊಂಡಿದೆ. ಪ್ರತಿಯೊಬ್ಬರು ಚಿತ್ರವನ್ನು ನೋಡಿ ತಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಇದೊಂದು ಉತ್ತಮ ಮಾರ್ಗದರ್ಶಕ ಚಿತ್ರವಾಗಿದೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers