WWW.TULUFILM.COM
+91 96327 14896 info@tulufilm.com
Films
ತುಳು ಚಿತ್ರರಂಗದ ಹೆಜ್ಜೆಗುರುತುಗಳು
Published on 28 September 2016
tulu-film-com-logo

  • ತುಳು ಚಿತ್ರರಂಗದ ಹೆಜ್ಜೆಗುರುತುಗಳು
    ತುಳುಚಿತ್ರರಂಗ ಅನೇಕ ಏಳುಬೀಳುಗಳನ್ನು ಕಂಡಿದೆ. ಹೊಸಹೊಸ ಪ್ರತಿಭೆಗಳು, ಉತ್ಸಾಹಿಗಳ ಪ್ರವೇಶದಿಂದಾಗಿ ತುಳುಚಿತ್ರರಂಗ ಈಗ ನಿಜವಾಗಿಯೂ ಸುವರ್ಣಯುಗವನ್ನು ಪ್ರವೇಶಿಸುತ್ತಿದೆ. 2014ರಿಂದೀಚೆಗೆ ಒಂದರ ಬೆನ್ನಿಗೊಂದರಂತೆ ತುಳು ಚಿತ್ರಗಳು ತೆರೆಕಂಡಿವೆ. ಕೆಲವರ್ಷಗಳಲ್ಲಿ ಉತ್ತಮ ಬೆಳೆಕಂಡ ತುಳು ಚಿತ್ರರಂಗ ಬರಗಾಲದ ವರ್ಷಗಳನ್ನು ಕಂಡದ್ದೂ ಉಂಟು. ಕೈಯಲ್ಲಿದ್ದದ್ದನ್ನೆಲ್ಲಾ ಹಾಕಿ, ಸಾಲ ಮಾಡಿ ಚಿತ್ರ ತೆಗೆದವರು ಸಂಪೂರ್ಣ ಸೋತು ಸುಣ್ಣವಾದದ್ದೂ ಉಂಟು, ಚಿಕ್ಕ ಬಜೆಟ್ ನಲ್ಲಿ ಚಿತ್ರ ತೆಗೆದು ಗೆದ್ದವರೂ ಇದ್ದಾರೆ. ಅದೇ ರೀತಿ ಸಾಕಷ್ಟು ದೊಡ್ಡ ಬಜೆಟ್ ನಲ್ಲಿ ಚಿತ್ರ ತೆಗೆದು ಸಾಹಸ ಮಾಡಿ ಗೆದ್ದವರೂ ಇದ್ದಾರೆ.
    ತುಳುಚಿತ್ರರಂಗಕ್ಕೆ ಚಾಲನೆ ನೀಡಿದವರು ಯಾರು ಎಂಬುದು ಒಂದು ಚರ್ಚೆಯ ವಿಷಯ. 1971ರಲ್ಲಿ ‘ಎನ್ನ ತಂಗಡಿ’ ಮತ್ತು ‘ದಾರೆದ ಬುಡೆದಿ’ ಎಂಬ ಎರಡು ಚಿತ್ರಗಳ ಮೂಲಕ ತುಳು ಚಿತ್ರರಂಗ ಅಂಬೆಗಾಲಿರಿಸಿತು. ತಮ್ಮ ನಾಟಕ ರಚನೆ, ನಿರ್ಮಾಣ, ನಿರ್ದೇಶನ ಮತ್ತು ನಟನೆಯಿಂದ ಆ ಕಾಲಕ್ಕೆ ಸಾಕಷ್ಟು ಪ್ರಸಿದ್ಧರಾಗಿದ್ದ ಕೆ. ಎನ್. ಟೇಲರ್ ಅವರು 1969ರಲ್ಲಿಯೇ ತುಳು ಚಿತ್ರ ನಿರ್ಮಿಸುವ ಕನಸು ಕಂಡು ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಂಡು, ನಿರ್ಮಾಪಕರ ಹುಡುಕಾಟದಲ್ಲಿ ಇದ್ದರು. ತುಳುವಿನಲ್ಲಿ ಚಿತ್ರ ನಿರ್ಮಿಸುವ ಧೈರ್ಯ ಯಾರಿಗೂ ಇರಲಿಲ್ಲ. ಬೆಂಗಳೂರಿನ ಎಸ್. ಎನ್. ರಾಜನ್ ತುಳು ಭಾಷೆಯ ಪ್ರಥಮ ಚಿತ್ರ ನಿರ್ಮಿಸಿದ ದಾಖಲೆ ಹೊಂದುವ ಸಲುವಾಗಿ ತರಾತುರಿಯಲ್ಲಿ ‘ಎನ್ನ ತಂಗಡಿ’ ಚಿತ್ರ ನಿರ್ಮಿಸಿ, ಬಿಡುಗಡೆ ಮಾಡಿದರು. ಪ್ರಥಮ ಕೊಡಗು ಚಿತ್ರ ‘ನಾಡ ಮಣ್ಣ್ ನಾಡ ಕೂಳ್’ (ನನ್ನ ಮಣ್ಣು ನನ್ನ ಊಟ) ಎಂಬ ಚಿತ್ರವನ್ನು 1972ರಲ್ಲಿಯೇ ನಿರ್ಮಿಸಿದ ಖ್ಯಾತಿಯೂ ಅವರ ಪಾಲಾಗಿದೆ. ಮೊದಲ ವರ್ಷದಲ್ಲಿ ಎರಡು ಚಿತ್ರಗಳು ನಿರ್ಮಾಣವಾದರೂ, ತಾಂತ್ರಿಕವಾಗಿ ಕಳಪೆಯಾಗಿದ್ದ ‘ಎನ್ನ ತಂಗಡಿ’ ಬಾಕ್ಸ್ ಆಫೀಸ್ನಲ್ಲಿ ತೋಪು ಹೊಡೆದು, ‘ದಾರೆದ ಬುಡೆದಿ’ ಸಾಕಷ್ಟು ಯಶಸ್ವಿಯಾಗಿಯಿತು. ಇದರ ಪರಿಣಾಮಗಾಗಿ 1972ರಲ್ಲಿ ಎರಡು ತುಳು ಚಿತ್ರಗಳು ಮತ್ತು 1973ರಲ್ಲಿ ನಾಲ್ಕು ಚಿತ್ರಗಳು ತೆರೆಕಂಡವು. ಆದರೂ ತುಳು ಚಿತ್ರರಂಗದ ಏಳುಬೀಳುಗಳು ನಡೆದೇ ಇದ್ದವು. 1975, 1980, 1982, 1985,1986,1989,1990,1992,1995,1996, 1999, 2000ರಲ್ಲಿ ಯಾವುದೇ ಚಿತ್ರ ತೆರೆಕಾಣಲಿಲ್ಲ. ಆದರೂ, ನಡುನಡುವೆ ಒಂದೋ ಎರಡೋ ಚಿತ್ರಗಳು ಬರುತ್ತಿದ್ದವು. 2002ರಿಂದ 2005ರ ವರಗೆ ತುಳು ಚಿತ್ರಗಳಿಗೆ ಸಂಪೂರ್ಣ ಬರ ಬಂದಿತ್ತು. 2009ರಲ್ಲಿಯೂ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ, 2011ರಿಂದ ತುಳು ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ತುಳು ಚಿತ್ರಗಳ ಹೆಜ್ಜೆ ಗುರುತುಗಳು ಇಲ್ಲಿವೆ.
  • ಕೆಲವು ಮೊದಲುಗಳು, ಕೆಲವು ವಾಸ್ತವಗಳು:
  • ಮೊದಲು ಚಿತ್ರೀಕರಣ ಮುಗಿಸಿದ ತುಳು ಚಿತ್ರ ಕೆ.ಎನ್. ಟೇಲರ್ ಅವರ ‘ದಾರೆದ ಬುಡೆದಿ’
  • ಮೊದಲು ಬಿಡುಗಡೆಗೊಂಡ ತುಳು ಚಿತ್ರ ಎಸ್.ಕೆ. ರಾಜನ್ ಅವರ ‘ಎನ್ನ ತಂಗಡಿ
  • ತುಳು ಚಿತ್ರಕ್ಕಾಗಿ ಮೊದಲು ಕ್ಯಾಮರಾ ಎದುರಿಸಿದ ನಟ ಪೈಲ್ವಾನ್ ಸುಂದರ ಕರ್ಕೇರ (‘ದಾರೆದ ಬುಡೆದಿ’). ಆದರೆ, ಅವರು ಕಾರಣಾಂತರಗಳಿಂದ ಈ ಚಿತ್ರದಲ್ಲಿ ಮುಂದುವರಿಯಲಿಲ್ಲ.
  • ತುಳು ಚಿತ್ರಕ್ಕಾಗಿ ಮೊದಲು ಕ್ಯಾಮರಾ ಎದುರಿಸಿದ ನಟಿ ಲೀಲಾವತಿ (‘ದಾರೆದ ಬುಡೆದಿ’)
  • ದಿನಕ್ಕೆ ಐದು ದೇಖಾವೆಗಳಲ್ಲಿ ಪ್ರದರ್ಶನಗೊಂಡ ಪ್ರಥಮ ತುಳು ಚಿತ್ರ “ದಾರೆದ ಬುಡೆದಿ”
  • ಮಂಗಳೂರಿನಲ್ಲೇ ಧ್ವನಿಮುದ್ರಣಗೊಂಡ ಪ್ರಥಮ ತುಳು ಚಿತ್ರ ‘ಕಾಸ್ ದಾಯೆ ಕಂಡನೆ
  • ರಾಜ್ಯ ಪ್ರಶಸ್ತಿ ಪಡೆದ ಮೊದಲ ತುಳು ಚಿತ್ರ ‘ಬಿಸತ್ತಿ ಬಾಬು’
  • ಪ್ರಚಾರದ ಟ್ರೇಲರ್ ಮಾಡಿದ ಪ್ರಥಮ ತುಳು ಚಿತ್ರ ‘ಸಾವಿರಡೊರ್ತಿ ಸಾವಿತ್ರಿ’
  • ಮೊದಲ ತುಳು ಕಲರ್ ಚಿತ್ರ ‘ಕರಿಯಣಿ ಕಟ್ಟಂದಿ ಕಂಡನೆ
  • ಮಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಮೊದಲ ತುಳು ಚಿತ್ರ ‘ಬಯ್ಯಮಲ್ಲಿಗೆ’.
  • ನಟನೊಬ್ಬ ದ್ವಿಪಾತ್ರದಲ್ಲಿ ನಟಿಸಿದ ಮೊದಲ ತುಳು ಚಿತ್ರ ‘ಪಗೆತ ಪುಗೆ’ (ಆನಂದ ಶೇಖರ್)
  • ಕೆ.ಎನ್. ಟೇಲರ್ ದ್ವಿಪಾತ್ರದಲ್ಲಿ ನಟಿಸಿದ ಮೊದಲ ಚಿತ್ರ ‘ಸಾವಿರಡೊರ್ತಿ ಸಾವಿತ್ರಿ’
  • ಕಾದಂಬರಿ ಆಧರಿತ ಮೊದಲ ತುಳು ಚಿತ್ರ ‘ಪಗೆತ ಪುಗೆ‘ (ಸೂರ್ಯನಾರಾಯಣ ಚಡಗರ ಹೆಣ್ಣು, ಹೊನ್ನು, ಮಣ್ಣು)
  • ತುಳು ಕಾದಂಬರಿ ಆಧರಿತ ಮೊದಲ ತುಳು ಚಿತ್ರ ‘ದೇವೆರ್‘ (ಸುಧಾಕರ ಬನ್ನಂಜೆಯವರ ‘ದೇವೆರ್’)
  • ಐತಿಹಾಸಿಕ ಕಥೆಯನ್ನು ಆಧರಿಸಿದ ಮೊದಲ ತುಳು ಚಿತ್ರ ‘ಕೋಟಿ ಚೆನ್ನಯ
  • ಜಾನಪದ ಕಥೆಯನ್ನು ಆಧರಿಸಿದ ಮೊದಲ ತುಳು ಚಿತ್ರ ‘ತುಳುನಾಡ ಸಿರಿ
  • ಮೊದಲ ತುಳು ಸಿನಿಮಾಸ್ಕೋಪ್ ಚಿತ್ರ ‘ಬಂಗಾರ್ ಪಟ್ಲೇರ್
  • ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡ ತಾರೆ ಜಯಮಾಲಾ (‘ಕಾಸ್ ದಾಯೆ ಕಂಡನೆ’)
  • ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರೀಕರಣಗೊಂಡ ತುಳು ಚಿತ್ರ ‘ಸೆಪ್ಟೆಂಬರ್ 8’ (24 ಗಂಟೆಗಳು)
  • ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಿದ ಮೊದಲ ತುಳು ಚಿತ್ರ ‘ನ್ಯಾಯೊಗಾದ್ ಎನ್ನ ಬದ್ಕ್’ (ಕೈರೋ)
  • ಸಂಪೂರ್ಣವಾಗಿ ತುಳುನಾಡಿನಿಂದ ಹೊರಗೆ ಚಿತ್ರೀಕರಣಗೊಂಡ ತುಳು ಚಿತ್ರ ‘ಭಾಗ್ಯವಂತೆದಿ‘ (ಬೆಂಗಳೂರು ಮತ್ತು ಕೋಲಾರ)
  • ಟೈಟಲ್ ಕಾರ್ಡ್ಗೆ ಅಮಿತಾಬ್ ಬಚ್ಚನ್ ಅವರು ಧ್ವನಿ ನೀಡಿರುವ ಏಕೈಕ ತುಳು ಚಿತ್ರ ‘ಕಾಸ್ ದಾಯೆ ಕಂಡನೆ’
  • ಡಿಜಿಟಲ್ ಸಂಗೀತವಿರುವ ಮೊದಲ ತುಳು ಚಿತ್ರ ‘ಬದ್ಕೊಂಜಿ ಕಬಿತೆ’
  • ಡಿಜಿಟಲ್ ಛಾಯಾಗ್ರಹಣದ ಮೊದಲ ತುಳು ಚಿತ್ರ ‘ಬದ್ಕ್’
  • ಹಾಡುಗಳೇ ಇಲ್ಲದ ಪ್ರಥಮ ತುಳು ಚಿತ್ರ ‘ಅಂತಪುರ’
  • 175 ದಿನಗಳ ಪ್ರದರ್ಶನ ಕಂಡ ಮೊದಲ ತುಳು ಚಿತ್ರ ‘ಒರಿಯಾರ್ದೊರಿ ಅಸಲ್
  • ಅತ್ಯಂತ ಕಡಿಮೆ ಓಡಿದ ತುಳು ಚಿತ್ರ ‘ಅಂತಪುರ’ (ಅಮೃತ ಚಿತ್ರಮಂದಿರದಲ್ಲಿ ಐದು ದಿನ). ಎರಡನೇ ಸ್ಥಾನದಲ್ಲಿದೆ ‘ಕಾಲ’ (ಜ್ಯೋತಿಯಲ್ಲಿ ಒಂದು ವಾರ)
  • ಎಲ್ಲಾ ತಾಂತ್ರಿಕ ಕೆಲಸಗಳನ್ನು ತುಳುನಾಡಿನಲ್ಲೇ ಪೂರೈಸಿದ ಮೊದಲ ತುಳು ಚಿತ್ರ ‘ಪಕ್ಕಿಲು ಮೂಜಿ
  • ವಿದೇಶದಲ್ಲಿ ಚಿತ್ರೀಕರಣವಾದ ಮೊದಲ ತುಳು ಚಿತ್ರ ‘ನಿರೆಲ್’
  • ಮೊದಲ ತುಳು ಟಿ.ವಿ. ಧಾರಾವಾಹಿ- ಸದಾನಂದ ಸುವರ್ಣ ಅವರ ‘ಗುಡ್ಡೆದ ಭೂತ’ (1990)
  • ಮೊದಲ ತುಳು ಕಿರುಚಿತ್ರ- ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ‘ಬರವುದ ಬಂಡಸಾಲೆ‘ (2004)
  • ಮೊದಲ ತುಳು ಡಿಜಿಟಲ್ ಕಿರುಚಿತ್ರ- ಪಿ.ಎನ್. ರಾಮಚಂದ್ರ ಅವರ ‘ಸುದ್ದ‘. ಇದು ಅಂತರ ರಾಷ್ಟ್ರೀಯ ಮನ್ನಣೆ ಗಳಿಸಿದೆ.
    ಪೂರ್ತಿಯಾಗದ, ಡಬ್ಬದಲ್ಲೇ ಉಳಿದ ಚಿತ್ರಗಳು:
    ಅನೇಕ ಚಿತ್ರಗಳು ಇಂದಿಗೂ ಮಾಧ್ಯಮಗಳಲ್ಲಿ ಸುದ್ದಿ ಮಾಡಿ ಅಲ್ಲಿಯೇ ಮಲಗಿರುವ ನಿದರ್ಶನಗಳು ಇವೆಯಾದರೂ, ಆರಂಭದ ಮೂರು ದಶಕಗಳಲ್ಲಿ ಆರ್ಥಿಕ ಮತ್ತಿತರ ಕಾರಣಗಳಿಂದ ಪೂರ್ತಿಯಾಗದ, ಡಬ್ಬದಲ್ಲಿಯೇ ಉಳಿದ ಚಿತ್ರಗಳನ್ನು ಗುರುತಿಸುವುದು ಅಗತ್ಯ. ಯಾಕೆಂದರೆ, ತುಳು ಚಿತ್ರ ನಿರ್ಮಾಣಕ್ಕೆ ಇದ್ದ ಉತ್ಸಾಹವನ್ನು ಅದು ತೋರಿಸುತ್ತದೆ. ಆರಂಭದ ಮೂರು ದಶಕಗಳಲ್ಲಿನ ಅಂತಹ ಚಿತ್ರಗಳು ಈ ಕೆಳಗಿನವು.
  • ಸರ್ಪ ಸಂಕಲೆ (1972)
  • ಕುಂಕುಮ ಸಾಕ್ಷಿ (1973)
  • ಬಂಗಾರ್ದ ಕುರಲ್ (1974) (2012ರಲ್ಲಿ ಇದೇ ಹೆಸರಿನ ಬೇರೆ ಬ್ಯಾನರ್ನ ಚಿತ್ರ ಬಿಡುಗಡೆಯಾಯಿತು.)
  • ಪಿಂಗಾರದ ಪೂ (1978)
  • ನಮ್ಮ ಭಾಗ್ಯ (1982)
  • ಪೂಜೆದ ಪೂ (1990)
  • ಮೋಕೆದ ಬಿಲೆ (1991)
  • ಪೊಣ್ಣ ಮನಸ್ಸ್ (1993)
  • ಮಾಡಿ ಗಡು (1994)
  • ನಿರೆಲ್ (1995) ಇದೇ ಹೆಸರಿನ, ಆದರೆ ಬೇರೆ ಬ್ಯಾನರ್ನ ಚಿತ್ರ 2014ರಲ್ಲಿ ಬಿಡುಗಡೆಯಾಯಿತು.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers