WWW.TULUFILM.COM
+91 96327 14896 info@tulufilm.com
Coorg
ಕೊಡವ
Published on 17 September 2016
kodava-film-4-copy

 

kodava-film-3 kodava-film-1 kodava-2 kodava-film5
ಕರ್ನಾಟಕದ ಪ್ರಾದೇಶಿಕ ಭಾಷೆಗಳಲ್ಲಿ ತುಳು ಚಿತ್ರರಂಗದ ಬೆನ್ನಲ್ಲೇ ಕೊಡವ ಚಿತ್ರರಂಗ ಆರಂಭವಾಯಿತಾದರೂ ಅಷ್ಟಾಗಿ ಬೆಳೆಯಲಿಲ್ಲ.1971ರಲ್ಲಿ ಎನ್ನತಂಗಡಿ ತುಳು ಚಿತ್ರ ನಿರ್ಮಾಣಮಾಡಿದ ಕೊಡಗಿನವರಾದ ಎಸ್.ಆರ್.ರಾಜನ್ ಅವರೇ ಮೊದಲ ಕೊಡವ ಚಿತ್ರ ನಾಡ ಮಣ್ಣ್ ,ನಾಡಕೂಳ್,(ನಮ್ಮ ಮಣ್ಣು,ನಮ್ಮ ಅನ್ನ) ಎಂಬ ಕೊಡವ ಚಿತ್ರವನ್ನು1972 ರಲ್ಲಿ ನಿರ್ಮಾಣ ಮಾಡಿದರು.
ಆದರೆ ಕೊಡವ ಚಿತ್ರರಂಗ ತುಳುವಿನಷ್ಟು ಸಮೃದ್ಧವಾಗಿ ಬೆಳೆಯಲಿಲ್ಲ 2010 ರ ವರೆಗೆ ಒಟ್ಟು ಒಂಭತ್ತು ಚಿತ್ರಗಳು ಮಾತ್ರ ಕೊಡವ ಭಾಷೆಯಲ್ಲಿ ಬಿಡುಗಡೆಯಾಗಿದೆ.
2ನೇ ಕೊಡವ ಚಿತ್ರ ಬಿಡುಗಡೆಯಾಗಲು 1981ರ ತನಕ ಕಾಯಬೇಕಾಯಿತು.ಆ ಚಿತ್ರವೇ ಮಾವೀರ ಆಚ್ಚು ನಾಯಕ ಮತ್ತೊಂದು ಕೊಡವ ಚಿತ್ರ ಬಿಡುಗಡೆಯಾಗಲು ಮತ್ತೆ 12 ವರ್ಷ ಕಾಯಬೇಕಾಯಿತು.1993ರಲ್ಲಿ ಮಂದಾರಪೂ ಎಂಬ ಚಿತ್ರ ಬಿಡುಗಡೆಯಾಯಿತು.
ನಂತರ 1994 ರಲ್ಲಿ ನಿರೀಕ್ಷೆ 1998ರಲ್ಲಿ ಬಾಳಪೊಲಂದ್ ಮತ್ತೆ 10 ವರ್ಷಗಳು ಬಳಿಕ 2008 ರಲ್ಲಿ ಪೊಣ್ಣರ ಮನಸ್ಸ್ 2009ರಲ್ಲಿ ಪೊನ್ನಮ್ಮ ,2010ರಲ್ಲಿ ಜಡಿಮಳೆ ಮತ್ತು ಶಿವಧ್ವಜ್ ನಿರ್ದೇಶನ ನಾ ಪುಟ್ಟನ್ ಮಣ್ಣ್ ಎಂಬ ಎರಡು ಚಿತ್ರಗಳು ಬಿಡುಗಡೆಯಾದವು.ಅಲ್ಲಿಂದ ಕೊಡವ ಚಿತ್ರರಂಗಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers