WWW.TULUFILM.COM
+91 96327 14896 info@tulufilm.com
Reviews
ಏಸ
Published on 10 November 2016
8

9ಯು 2 ಸಿನೇಮಾ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾದ ಎಂ.ಎನ್ ಜಯಂತ್ ಚಿತ್ರಕಥೆ ಬರೆದು ನಿರ್ದೇಶಿಸಿದ ತುಳು ಹಾಸ್ಯ ಚಿತ್ರ”ಏಸ” ಚಿತ್ರದ ನಿರ್ಮಾಪಕರು ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ,ರಾಹುಲ್ ಅಮಿನ್ ಹಾಗೂ ರಾಧಿಕಾ ರಾವ್ ನಾಯಕ ನಾಯಕಿಯಾಗಿ ಅಭಿನಯಿಸಿದ ಈ ಚಿತ್ರದಲ್ಲಿ ಹಾಸ್ಯ ಕಲಾವಿದರಾದ ನವೀನ್ ಪಡೀಲ್, ಅರವಿಂದ ಬೋಳಾರ್,ಭೋಜರಾಜ್ ವಾಮಂಜೂರು,ಶೋಭಾರಾಜ್ ಪಾವೂರು,ಸತೀಶ್ ಬಂದಲೆ,ಜಯರಾಮ ಆಚಾರ್ಯ,ಸುನೀಲ್ ನೆಲ್ಲಿಗುಡ್ಡೆ,ಭವ್ಯ ಶ್ರೀ ರೈ,ಶಾಂತಿ ಶೆಣೈ ಮೊದಲಾದವರು ಅಭಿನಯಿಸಿದ್ದಾರೆ.ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು.ಸಾಹಿತ್ಯ ರಚನೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಶಶಿರಾಜ್ ಕಾವೂರು ಹಾಗೂ ಲೋಕು ಕುಡ್ಲ ಬರೆದ್ದಿದಾರೆ.ಗುರುರಾಜ್ ಎಂ.ಬಿ ಮತ್ತು ಗುರು ಬಾಯರ್ ಸಂಗೀತ ಸಂಯೋಜನೆ ಮಾಡಿದ ಹಾಡುಗಳಿಗೆ ಸ್ಯಾಂಡಲ್ ವುಡ್ ನ ಖ್ಯಾತ ಗಾಯಕರಾದ ವಿಜಯ ಪ್ರಕಾಶ್,ಸುಪ್ರಿಯಾ ಜೋಶಿ,ಸಂಗೀತ ಬಾಲ ಚಂದ್ರ,ಸಂತೋಷ್ ವೆಂಕಿ,ಲೋಕು ಕುಡ್ಲ ನಿತೀನ್ ರಾಜ್ ಅಲ್ಲದೆ ಹಾಸ್ಯ ಕಲಾವಿದ ಭೋಜರಾಜ್ ವಾಮಂಜೂರು ಮೊದಲ ಬಾರಿಗೆ ಈ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿದ್ದಾರೆ.ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು.ಆನಂದ್ ಆಡಿಯೋ ಸಂಸ್ಥೆಯು ಹಾಡಿನ ರೈಟ್ಸ್ ನ್ನು ಖರೀದಿಸಿದೆ.ಚಿತ್ರಕ್ಕೆ ಕಥೆ-ಸಂಭಾಷಣೆ ಶೋಭರಾಜ್ ಪಾವೂರು,ಛಾಯಾಗ್ರಹಣ ಮೋಹನ್ ಲೋಕನಾಥನ್ ಅವರದ್ದು.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers