WWW.TULUFILM.COM
+91 96327 14896 info@tulufilm.com
Profiles
ಎಂ.ಕೆ. ಸೀತಾರಾಮ ಕುಲಾಲ್
Published on 18 August 2016
654

ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ಯಾನ್ ಮೂಲೆ ಕಾತೊಂದುಲ್ಲೆ ಮರತೇ ಪೋಪನಾ, ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಂಡುಗೆ, ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್,ಬ್ರಹ್ಮನ ಬರವು ಮಾಜಂದೆ ಪೊಂಡಾ/ ಅಪ್ಪೆ ಮನಸ್ ಬಂಗಾರ ಅಮ್ಮ ತೆನಸು ಸಿಂಗಾರ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೊಡಿದ್ ಪಾರಡಾ.

ಹೀಗೆ ಸುಮಾರು 11 ತುಳು ಚಿತ್ರಗಳಿಗೆ 25ಕ್ಕೂ ಮಿಕ್ಕಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಹಿರಿಯ ತುಳು ಸಾಹಿತಿ ಎಂ.ಕೆ.ಸೀತಾರಾಮ್ ಕುಲಾಲ್.

ದ.ಕ ಜಿಲ್ಲೆಯ ಬಿಜೈ ನಿವಾಸಿಯಾದ.  ಸೀತಾರಾಮ್ ಕುಲಾಲ್ ರವರು ಮೊದಲು ದಾಸಿ ಪುತ್ರ ಕನ್ನಡ ನಾಟಕದ ಮೂಲಕ ರಂಗ ಭೂಮಿ ಪ್ರವೇಶಿಸಿದರು. ನಂತರ ಪಗೆತ ಪುಗೆ ತುಳು ಚಲನ ಚಿತ್ರಕ್ಕೆ ಸಾಹಿತ್ಯ ಬರೆಯುದರೊಂದಿಗೆ ತುಳು ಚಿತ್ರರಂಗದ ಪ್ರವೇಶವಾಯಿತು. ಅಲ್ಲದೆ ಬಯ್ಯಮಲ್ಲಿಗೆ ಬೊಳ್ಳಿತೋಟ ಉಡಲ್ದ ತುಡರ್ ಬದ್ಕದ ಬಿಲೆ,  ಕೋಟಿ ಚೆನ್ನಯ, ಬದಿ ಸೇರಿ ಒಟ್ಟು ಹನ್ನೊಂದು ಚಿತ್ರಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಸುಮಾರು17 ಕನ್ನಡಚಾರಿತ್ರಿಕ ನಾಟಕ 6 ಕನ್ನಡ ಪೌರಣಿಕ ಸೇರಿ ಒಟ್ಟು 66 ಕೃತಿಗಳನ್ನು ರಚಿಸಿರುತ್ತಾರೆ. ಕಲಾವಿದರಾಗಿ ಕಳೆದ 45ವರ್ಷಗಳಿಂದ ಕಲಾಸೇವೆ ಮಾಡಿದ ಇವರು ತಾವು ರಚಿಸಿರುವ ಯಾವುದೇ ಕೃತಿಗಾಗಲಿ ನಟನೆ ನಾಟಕ ಹಾಗೂ ಹಾಡುಗಳಗಾಗಲಿ ಯಾವುದೇ ರೀತಿಯ ಸಂಭಾವನೆಯನ್ನು ಪಡೆದಿರುವುದಿಲ್ಲ. ನಟನಾಗಿ,ನಾಟಕಕಾರನಾಗಿ ಸಾಹಿತಿಯಾಗಿ, ನಿರ್ದಶಕನಾಗಿ ತುಳು ರಂಗಭೂಮಿಗೆ ಹಾಗೂ ತುಳು ಚಲನ ಚಿತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಧೆಗಳು ಇವರನ್ನು ಗೌರವಿಸಿದೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers